ಶುಕ್ರವಾರ, ಅಕ್ಟೋಬರ್ 2, 2026

ರಜೆ ಬಂತು ರಜೆ | ಮಕ್ಕಳ ಕವನ | ವೆಂಕಟೇಶ ಚಾಗಿ | raje bantu raje | makkala kavana | venkatesh chagi

***ರಜೆ ಬಂತು ರಜೆ ****

( ಮಕ್ಕಳ ಕವನ )

ರಜೆ ಬಂತು ರಜೆ 
ಖುಷಿ ತಂತು ರಜೆ 
ಸ್ಕೂಲು ಬ್ಯಾಗು ಹೊಗೆ
ದಿನ್ನೆ ಹತ್ತಿ ನೆಗೆ ...!!

ಟೈರು ಗಾಲಿ ತೆಗೆ 
ಕಬ್ಬು ಜಲ್ಲೆ ಜೆಗೆ 
ಚಿನ್ನಿ ದಾಂಡು ಹೊಡೆ 
ಬ್ಯಾಟು ಬಲು ಬಿಡೆ..!!

ಅವನ ಇವನ ಕರೆ 
ಈಜಲಿದೆ ಕೆರೆ 
ದಿನಗಳೆಲ್ಲ ಸಂಡೆ 
ಕಿಸೆ ತುಂಬ ಉಂಡೆ..!!

ಬಿಸಿಲು ಜಾಸ್ತಿ ಅಂತೆ 
ಬುದ್ಧಿವಾದ ಕಂತೆ 
ನಮಗೆ ಇಲ್ಲ ಅಂಕೆ 
ಬೇಡ ನಿಮಗೆ  ಶಂಕೆ..!!

ಸಂಜೆ ಬಂತು ಮಳೆ 
ಕೊಳೆಯ ಅಂಗಿ ತೊಳೆ 
ನೆನಪು ಅಯ್ತು ಮನೆ 
ದಿನದ ಆಟ ನೆನೆ..!!


ವೆಂಕಟೇಶ್ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ