**ಮೋಡದ ಮನವಿ**
(ಮಕ್ಕಳ ಕವನ )
ಗಗನದಲ್ಲಿ ಖಾಲಿ ಖಾಲಿ
ಧರೆಗೆ ಬಂತು ನೋಡಿ ಬರ
ಕೆರೆಯ ತೊರೆಯ ನೀರೆಲ್ಲ
ನರಳುತ್ತಿತ್ತು ಬೋಳು ಮರ ||
ಹೊರಗೆ ತುಂಬಾ ಬಿಸಿಲು ಎಂದು
ಮನೆಯ ಒಳಗೆ ಕುಳಿತರು
ಸೆಖೆಯ ಬೇಗೆ ಸಹಿಸಿಕೊಂಡು
ಮಳೆಯ ಜಪಿಸುತಿದ್ದರು ||
ಮೋಡ ಒಂದು ಜನರ ಕೂಗಿ
ತನ್ನ ಬಳಿಗೆ ಸೆಳೆಯಿತು
ಮಾತನೊಂದು ಕೇಳ ಬನ್ನಿ
ಎಂದು ಕೂಗಿ ಕರೆಯಿತು ||
ಮೋಡ ಕಂಡು ಜನ ಬಂದು
ಏನು ಮಾತು ಹೇಳು ಎಂದರು
ಗಗನ ತುಂಬ ಮೋಡವಿರಲು
ಹಸಿರು ಬೆಳೆಸಿ ಎಂದಿತು ||
ಪುಟ್ಟ ಪುಟ್ಟ ಸಸಿಗಳನ್ನು
ತಂದು ಜನರು ನೆಟ್ಟರು
ಅಲ್ಲಿ ಇಲ್ಲಿ ನೀರು ಹುಡುಕಿ
ಗಿಡಕೆ ನೀರು ಕೊಟ್ಟರು ||
ಮೋಡಗಳಿಗೆ ಹಸಿರು ಕಂಡು
ಧರೆಗೆ ಮಳೆಯ ತಂದವು
ಧರೆಯ ಮೇಲೆ ಹಸಿರು ಇರಲು
ಮಳೆಗೆ ಕೊರತೆ ಇರದು ಎಂದವು ||
=> ವೆಂಕಟೇಶ ಚಾಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ