ಮಂಗ ಮತ್ತು ಮೊಸಳೆ | ಮಕ್ಕಳ ಕಥಾಕವನ | ವೆಂಕಟೇಶ ಚಾಗಿ | manga mattu mosale | monkey and crocodile| | makkala katha kavana | venkatesh chagi


ಮಂಗ & ಮೊಸಳೆ



ಕಾಡಲಿ ಒಂದು ಕೆರೆಯಿತ್ತು
ದಂಡೆಯ ಮೇಲೆ ಮರವಿತ್ತು
ಮರದಲಿ ಮಂಗ ಕೆರೆಯಲಿ ಮೊಸಳೆ
ಇಬ್ಬರ ಗೆಳೆತನ ಚೆನ್ನಾಗಿತ್ತು||

ಮಂಗವು ಮರವನು ಏರಿತ್ತು
ತಿಂದಿತು ರುಚಿ ರುಚಿ ಹಣ್ಣನ್ನು
ಮೊಸಳೆಗು ಕೊಟ್ಟಿತು ಮೊಸಳೆಯು ತಿಂದಿತು
ಹೊಗಳಿತು ಮಂಗನ ಗುಣವನ್ನು||

ಗೆಳೆತನ ಸುಂದರವಾಗಿತ್ತು
ದಿನಗಳು ಕಳೆದವು ಸಂತಸದಿ
ಮಂಗನ ಚೇಷ್ಟೆ ಮೊಸಳೆಯ ನಿಷ್ಠೆ
ಮಾದರಿ ಗೆಳೆತನ ಕಾಡಿನಲಿ||

ಮೊಸಳೆಗು ಇದ್ದಳು ಹೆಂಡತಿಯು
ತಿಂದಳು ರುಚಿ ರುಚಿ ಹಣ್ಣನ್ನು
ಮಂಗನ ಹೃದಯ ತರುವೆಯಾ ಇನಿಯಾ
ಹೆಂಡತಿ ಹಿಡಿದಳು ಹಠವನ್ನು||

ಮೊಸಳೆಯು ಮಂಗನ ಕರೆದಿತ್ತು
ಭೋಜನಕೂಟವು ಮನೆಯಲ್ಲಿ
ಮೊಸಳೆಯ ಬೆನ್ನನು ಏರಿದ ಮಂಗ
ಹೊರಟಿತು ಸವಾರಿ ಖುಷಿಯಲ್ಲಿ||

ಇಬ್ಬರು ಕೆರೆಯ ಮಧ್ಯದಲಿ
ಮೊಸಳೆಯು ಹೇಳಿತು ನಿಜವನ್ನು
ರುಚಿ ರುಚಿ ಹೃದಯವ ಮರದಲೇ ಬಿಟ್ಟೆ
ಹೂಡಿತು ಮಂಗ ಉಪಾಯವನ್ನು||

ಮರಳಿತು ಸವಾರಿ ಹಿಂದಕ್ಕೆ
ಹೃದಯವನಿಟ್ಟ ಮರದಕಡೆ
ದಂಡೆಯು ಬರಲು ಮಂಗವು ಜಿಗಿದು
ಏರಿತು ಮರವನು ಕೊಂಬೆಯ ಕಡೆ||

ಮಂಗವು ಬುದ್ದಿಯ ಹೇಳಿತ್ತು
ಮೊಸಳೆಗೆ ತಪ್ಪು ಅರಿವಾಯ್ತು
ದುಷ್ಟರ ಗೆಳೆತನ ಕೆಟ್ಟದು ಎಂದು





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪುಟ್ಟನ ಗಾಡಿ | ಮಕ್ಕಳ ಕವನ | ವೆಂಕಟೇಶ ಚಾಗಿ | puttana gaadi | makkala kavana | venkatesh chagi

ಮಳೆರಾಯ - ಮಕ್ಕಳ ಕವನ - ವೆಂಕಟೇಶ ಚಾಗಿ - maleraya - makkala kavana - venkatesh chagi

ನನ್ನ ತಂಗಿ - ಮಕ್ಕಳ ಕವನ - ವೆಂಕಟೇಶ ಚಾಗಿ - nanna tangi - makkala kavana - venkatesh chagi