"ಬೇಸಿಗೆ ಮಳೆ"""
ಗುಡುಗುಡು ಗುಡುಗಿತು
ಆಗಸದಲ್ಲಿ
ಪಳ್ಳನೆ ಮೂಡಿತು
ಮಿಂಚಿನ ಬಳ್ಳಿ
ಮೋಡವು ನೀಡಿತು
ಮೊದಲ ಮಳೆ
ಸಂತಸ ಗೊಂಡಿತು
ದಣಿದ ಇಳೆ..||
ರಪರಪ ಸುರಿಯಿತು
ಮಳೆಹನಿ ನೀರು
ಹಸಿರಿಗೆ ಆಯಿತು
ಹಬ್ಬದ ಖೀರು
ಮರವು ಕುಣಿಯಿತು
ಹನಿಹನಿ ಚೆಲ್ಲಿ
ಹಕ್ಕಿಗೆ ಹೇಳಿತು
ಗೂಡಲಿ ನಿಲ್ಲಿ..!!
ಗಾಳಿಯು ಓಡಿತು
ದಿಕ್ಕನು ಕಾಣದೆ
ಗಡಗಡ ನಡುಗಿತು
ನೋಡಲು ನನ್ನೆದೆ
ಬಳಬಳ ಬಿದ್ದವು
ತಣ್ಣನೆ ಆಣಿಕಲ್ಲು
ಬಾಯಲಿ ಇಡಲು
ನಡುಗಿತು ಹಲ್ಲು..!!
ಸಂಭ್ರಮ ಮೂಡಿತು
ಬೇಸಿಗೆ ಮಳೆಗೆ
ಕೋಗಿಲೆ ಧ್ವನಿಸಿತು
ಮೊದಲ ಹಾಡಿಗೆ
ವಟವಟ ನುಡಿಯಿತು
ಕೆರೆಯೊಳು ಕಪ್ಪೆ
ಖುಷಿಯನು ಪಡದಿರೆ
ನಮ್ಮದೆ ತಪ್ಪೆ..!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ