ಮೊಲದ ಮರಿ | ಮಕ್ಕಳ ಕವನ | ವೆಂಕಟೇಶ ಚಾಗಿ | molada mari | makkala kavana | venkatesh chagi

 

**ಮುದ್ದಿನ ಮೊಲ**



ಅಲ್ಲಿ ಇಲ್ಲಿ ಛಂಗನೆ ನೆಗೆದು
ಓಡುವೆ ಎಲ್ಲಿಗೆ ಮೊಲದ ಮರಿಯೇ |

ನಿನ್ನನು ಎತ್ತಿ ಆಡಿಸುವಾಸೆ
ನನ್ನಯ ಬಳಿಗೆ ಬಾ ಮರಿಯೇ |

ಬಿಲದ ಒಳಗೆ ಅಡಗುವೆ ಏಕೆ
ತಿನ್ನಲು ನಿನಗೆ ಗಜ್ಜರಿ ಬೇಕೆ ?  |

ಅಮ್ಮಗೆ ಅಡುಗೆ ಮಾಡುವ ತವಕ
ಆಡುವ ನಲಿಯುತ ಬಾ ಮರಿಯೆ |

ಕಾಮನಬಿಲ್ಲು ಬಾನಲಿ ಮೂಡಿ
ಭೂಮಿ ತಾಯಿಗೆ ಸುಂದರ ಗರಿಯೇ |

ನೋಡಲು ಚಂದ ನೀನಿರೆ ಅಂದ
ಜಿಗಿಯುತ ಬಳಿಗೆ ಬಾ ಮರಿಯೇ |


=> ವೆಂಕಟೇಶ ಚಾಗಿ





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪುಟ್ಟನ ಗಾಡಿ | ಮಕ್ಕಳ ಕವನ | ವೆಂಕಟೇಶ ಚಾಗಿ | puttana gaadi | makkala kavana | venkatesh chagi

ಮಳೆರಾಯ - ಮಕ್ಕಳ ಕವನ - ವೆಂಕಟೇಶ ಚಾಗಿ - maleraya - makkala kavana - venkatesh chagi

ನನ್ನ ತಂಗಿ - ಮಕ್ಕಳ ಕವನ - ವೆಂಕಟೇಶ ಚಾಗಿ - nanna tangi - makkala kavana - venkatesh chagi