ಶುಕ್ರವಾರ, ಅಕ್ಟೋಬರ್ 2, 2026

ನಾನು ಕಲಿಯುವೆ | ಮಕ್ಕಳ ಕವನ | ವೆಂಕಟೇಶ ಚಾಗಿ | nanu kaliyuve | makkala kavana | venkatesh chagi

 ***ನಾನು ಕಲಿಯುವೆ***


(ಮಕ್ಕಳ  ಕವನ)

ಕಾಗೆಯಕ್ಕ ಕಾಗೆಯಕ್ಕ
ಕಲಿಸು ನಿನ್ನ ಒಳ್ಳೆಯ ಗುಣವ
ಬಳಗವ ಕರೆದು ಹಂಚಿ ತಿನ್ನುವೆ
ನಾನು ಬಳಗವ ಕರೆದು ಹಂಚಿ ತಿನ್ನುವೆ ||

ನಾಯಿಯಣ್ಣ ನಾಯಿಯಣ್ಣ
ಕಲಿಸು ನಿನ್ನ ಒಳ್ಳೆಯ ಗುಣವ
ನೀನು ಉಪಕಾರವನು ಮರೆಯಲಾರೆ
ನಿನ್ನ ಗುಣವ ಕಲಿತು  ಜಾಣನಾಗುವೆ ||

ಇರುವೆಯಣ್ಣ ಇರುವೆಯಣ್ಣ
ಕಲಿಸು ನಿನ್ನ ಒಳ್ಳೆಯ ಗುಣವ
ಶಿಸ್ತನು ನೀನು ಮರೆಯದೆ ಪಾಲಿಸುವೆ
ಬದುಕಲಿ ಶಿಸ್ತನು ನಾನೂ ಪಾಲಿಸುವೆ ||

ತೆಂಗಿನಮರವೆ ತೆಂಗಿನಮರವೆ 
ಕಲಿಸು ನಿನ್ನ ಒಳ್ಳೆಯ ಗುಣವ
ಜಗಕೆ ಕಲ್ಪವೃಕ್ಷವು ನೀನು ಎಂದೆಂದೂ
ನಿನ್ನ ಉಪಕಾರವನು ಮರೆಯೆ ನಾನೆಂದು ||

ಕೋಗಿಲೆ ಹಕ್ಕಿಯೆ ಕೋಗಿಲೆ ಹಕ್ಕಿಯೆ
ಕಲಿಸು ನಿನ್ನ ಒಳ್ಳೆಯ ಗುಣವ
ಚೈತ್ರದ ಸಂತಸ ಹರಡುವೆ ಎಲ್ಲೆಲ್ಲೂ
ಬದುಕಲಿ ಖುಷಿಯ ಹರಡುವೆ ನಾನೆಂದೂ ||

ಆಮೆಯಣ್ಣ ಆಮೆಯಣ್ಣ
ಕಲಿಸು ನಿನ್ನ ಒಳ್ಳೆಯ ಗುಣವ
ಶಾಂತಿ ಸಹನೆ ಏಕಾಗ್ರತೆ ಕಲಿಸು
ಬದುಕಲಿ ಗುರಿಗಳ ಮುಟ್ಟುವೆ ನಾನೆಂದೂ ||


=> ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ