ರೈತ | ಮಕ್ಕಳ ಕವನ | ವೆಂಕಟೇಶ ಚಾಗಿ | raita | makkala kavana | venkatesh chagi

 ರೈತ




ಅಪ್ಪನಂತೆ  ನಾನೂ
ಒಬ್ಬ ರೈತನಾಗುವೆ
ಉತ್ತಿಬೆಳೆದು ಜನರಿಗೆ
ಅನ್ನ ನೀಡುವೆ ||

ಗೋಧಿ ಜೋಳ ರಾಗಿ
ನಾನು ಬೆಳೆಯುವೆ
ಫಸಲು ಬಂದ ಮೇಲೆ
ನಾನು ರಾಶಿ ಮಾಡುವೆ ||

ತರಕಾರಿ ಹಣ್ಣು ಕಾಳನ್ನು
ಸುತ್ತಲೂ ಬೆಳೆಸುವೆ
ಎರೆಹುಳು ಗೊಬ್ಬರಹಾಕಿ
ಫಲವತ್ತಾದ ಬೆಳೆ ಬೆಳೆಯುವೆ ||

ಮಲ್ಲಿಗೆ ಸಂಪಿಗೆ ಹೂವನ್ನು
ಹೊಲದಲಿ ಬೆಳೆಯುವೆ
ಸುಂದರವಾದ ಹೂವನ್ನು
ಅಮ್ಮನ ಕೈಯಲಿ ನೀಡುವೆ ||

ಆಡು ಮೇಕೆ ಹಸುಗಳನ್ನು
ನಾನು ಸಾಕುವೆ 
ಹಾಲು ಮೊಸರು ಬೆಣ್ಣೆಯನ್ನು
ಖಷಿಯಲಿ ತಿನ್ನುವೆ  ||

ರಾಮ ಶ್ಯಾಮ ರಹಿಮರಿಗೆಲ್ಲಾ
ವ್ಯವಸಾಯವ ಕಲಿಸುವೆ
ರೈತನೆ ದೇಶದ ಬೆನ್ನೆಲುಬೆಂದು
ಜಗಕೆ ಸಾರುವೆ
ಈ ಜಗಕೆ ಸಾರುವೆ...||


=> ವೆಂಕಟೇಶ ಚಾಗಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪುಟ್ಟನ ಗಾಡಿ | ಮಕ್ಕಳ ಕವನ | ವೆಂಕಟೇಶ ಚಾಗಿ | puttana gaadi | makkala kavana | venkatesh chagi

ಮಳೆರಾಯ - ಮಕ್ಕಳ ಕವನ - ವೆಂಕಟೇಶ ಚಾಗಿ - maleraya - makkala kavana - venkatesh chagi

ನನ್ನ ತಂಗಿ - ಮಕ್ಕಳ ಕವನ - ವೆಂಕಟೇಶ ಚಾಗಿ - nanna tangi - makkala kavana - venkatesh chagi