ಎಂಥಾ ಸೆಕೆ | ಮಕ್ಕಳ ಕವನ | ವೆಂಕಟೇಶ ಜಾಗಿ | entha seke | makkala kavana | venkatesh chagi

 

ಎಂಥಾ ಸೆಕೆ..!!?



ಬಂತು ಬಂತು ಬೇಸಿಗೆಕಾಲ
ಎಲ್ಲೆಡೆ ನೋಡು ಸೆಕೆಯ ಜಾಲ
ಕುಂತರು ನಿಂತರು ಬೆವರುವೆವು
ಮನೆಯನು ಬೇಗ ಸೇರುವೆವು !!

ಆಟವನಾಟಡಲು ನೆರಳೇ ಇಲ್ಲ
ನೆರಳು ನೀಡವ ಮರಗಳು ಇಲ್ಲ
ಮನೆಯ ಕಟ್ಟಲು ಕಡಿದೆವು ನಾವು
ಬೇಸಿಗೆ ಸೆಕೆಗೆ ಬೆಂದೆವು ನಾವು..!!

ಕುಡಿಯುವ ನೀರಿಗೆ ಹಾಹಾಕಾರ
ನೀರು ಇಲ್ಲದೆ ನೆಮ್ಮದಿ ದೂರ
ಬತ್ತಿವೆ ಭೂಮಿಯ ಜಲಮೂಲ
ಬಾಧಿಸತೊಡಗಿದೆ ಬೇಸಿಗೆಕಾಲ ||

ಮರಳುಗಾಡಲೂ ಸುರಿಮಳೆಯು
ಏನನು ಹೇಳಿದೆ ನಮ್ಮ ಇಳೆಯು
ಅಭಿವೃದ್ಧಿ ಎಂಬ ನಮ್ಮಭಿಮಾನ
ನಿಸರ್ಗ ನೀಡಿತು ಬಹುಮಾನ..!!


ಪ್ರತಿ ಮನೆಗೊಂದು ಮರವಿರಲಿ
ಹಸಿರು ಉಳಿಸಿ ಕಾನೂನು ಬರಲಿ
ಊರಿಗೆ ಒಂದು ವನವಿರಲು
ಭೂಮಿ ತುಂಬಾ ಕೂಲು ಕೂಲು..||


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪುಟ್ಟನ ಗಾಡಿ | ಮಕ್ಕಳ ಕವನ | ವೆಂಕಟೇಶ ಚಾಗಿ | puttana gaadi | makkala kavana | venkatesh chagi

ಮಳೆರಾಯ - ಮಕ್ಕಳ ಕವನ - ವೆಂಕಟೇಶ ಚಾಗಿ - maleraya - makkala kavana - venkatesh chagi

ನನ್ನ ತಂಗಿ - ಮಕ್ಕಳ ಕವನ - ವೆಂಕಟೇಶ ಚಾಗಿ - nanna tangi - makkala kavana - venkatesh chagi