ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ನವಿಲೆ | ಮಕ್ಕಳ ಕವನ | ವೆಂಕಟೇಶ ಚಾಗಿ | nanna navile | makkala kavana | venkatesh chagi

ಇಮೇಜ್
  ನನ್ನ ನವಿಲೆ ನವಿಲೆ ನವಿಲೆ ಸುಂದರ ನವಿಲೆ ಬರುವೆಯಾ ನನ್ನ ಶಾಲೆಯ ಕಡೆಗೆ ಇಬ್ಬರೂ ಆಡೋಣ ಜೊತೆಯಲಿ ಇಬ್ಬರು ಕುಣಿಯೋಣ || ಶಾಲೆಯ ತೋಟದ ಹೂಗಳ ನೋಡು ಚಂದದ ಅಂದದ ಗಿಡಗಳ ನೋಡು ಹಾಡುತ ಕುಣಿಯುತ ಇಬ್ಬರೂ ಹಾಡೋಣ ಜೊತೆಯಲಿ ಇಬ್ಬರೂ ಹಾಡೋಣ || ತಿನ್ನಲು ಹಣ್ಣನು ಕೊಡುವೆನು ನಿನಗೆ ಸುಂದರ ಗರಿಯಾ ಕೊಡುವೆಯಾ ನನಗೆ ಮನೆಯನು ಕಟ್ಟಿ ಆಟವ ಆಡೋಣ ಗೊಂಬೆಯ ಮದುವೆ ಮಾಡೋಣ || ಗುಬ್ಬಿ ಗಿಳಿಗಳು ಕರೆದಿವೆ ಬಳಿಗೆ ಅಳಿಲು ಮೊಲಗಳು ಛಂಗನೆ ಜಿಗಿದಿವೆ ತಂಪಿನ ಮರದಡಿ ಎಲ್ಲರೂ ಸೇರೋಣ ಜೊತೆಯಲಿ ಎಲ್ಲರೂ ನಲಿಯೋಣ || => ವೆಂಕಟೇಶ ಚಾಗಿ => ವೆಂಕಟೇಶ ಚಾಗಿ 👉 ವೆಂಕಟೇಶ ಚಾಗಿ ( about me ) ಮತ್ತಷ್ಟು ಓದಿ 👉  ಕಗ್ಗಗಳು (click here) 👉 ಗಜಲ್ ಗಳು (click here) 👉 ಕವನಗಳು (click here ) 👉 ಕವಿತೆಗಳು (click here ) 👉 ಹಾಯ್ಕುಗಳು ( click here) 👉 ಹನಿಗವನಗಳು (click here ) 👉 ಮಕ್ಕಳ ಕಥೆಗಳು (click here) 👉 ಮಕ್ಕಳ ಕವನಗಳು (click here) Etc

ಎಂಥಾ ಸೆಕೆ | ಮಕ್ಕಳ ಕವನ | ವೆಂಕಟೇಶ ಜಾಗಿ | entha seke | makkala kavana | venkatesh chagi

ಇಮೇಜ್
  ಎಂಥಾ ಸೆಕೆ..!!? ಬಂತು ಬಂತು ಬೇಸಿಗೆಕಾಲ ಎಲ್ಲೆಡೆ ನೋಡು ಸೆಕೆಯ ಜಾಲ ಕುಂತರು ನಿಂತರು ಬೆವರುವೆವು ಮನೆಯನು ಬೇಗ ಸೇರುವೆವು !! ಆಟವನಾಟಡಲು ನೆರಳೇ ಇಲ್ಲ ನೆರಳು ನೀಡವ ಮರಗಳು ಇಲ್ಲ ಮನೆಯ ಕಟ್ಟಲು ಕಡಿದೆವು ನಾವು ಬೇಸಿಗೆ ಸೆಕೆಗೆ ಬೆಂದೆವು ನಾವು..!! ಕುಡಿಯುವ ನೀರಿಗೆ ಹಾಹಾಕಾರ ನೀರು ಇಲ್ಲದೆ ನೆಮ್ಮದಿ ದೂರ ಬತ್ತಿವೆ ಭೂಮಿಯ ಜಲಮೂಲ ಬಾಧಿಸತೊಡಗಿದೆ ಬೇಸಿಗೆಕಾಲ || ಮರಳುಗಾಡಲೂ ಸುರಿಮಳೆಯು ಏನನು ಹೇಳಿದೆ ನಮ್ಮ ಇಳೆಯು ಅಭಿವೃದ್ಧಿ ಎಂಬ ನಮ್ಮಭಿಮಾನ ನಿಸರ್ಗ ನೀಡಿತು ಬಹುಮಾನ..!! ಪ್ರತಿ ಮನೆಗೊಂದು ಮರವಿರಲಿ ಹಸಿರು ಉಳಿಸಿ ಕಾನೂನು ಬರಲಿ ಊರಿಗೆ ಒಂದು ವನವಿರಲು ಭೂಮಿ ತುಂಬಾ ಕೂಲು ಕೂಲು..|| => ವೆಂಕಟೇಶ ಚಾಗಿ ಮುಂದಿನ ಕವನ ( click here ) 👉 ವೆಂಕಟೇಶ ಚಾಗಿ ( about me ) ಮತ್ತಷ್ಟು ಓದಿ 👉  ಕಗ್ಗಗಳು (click here) 👉 ಗಜಲ್ ಗಳು (click here) 👉 ಕವನಗಳು (click here ) 👉 ಕವಿತೆಗಳು (click here ) 👉 ಹಾಯ್ಕುಗಳು ( click here) 👉 ಹನಿಗವನಗಳು (click here ) 👉 ಮಕ್ಕಳ ಕಥೆಗಳು (click here) 👉 ಮಕ್ಕಳ ಕವನಗಳು (click here)

ನಾನಲ್ಲ | ಮಕ್ಕಳ ಕವನ | ವೆಂಕಟೇಶ ಚಾಗಿ | naanalla | makkala kavana | venkatesh chagi

ಇಮೇಜ್
 ** ನಾನಲ್ಲ** ( ಮಕ್ಕಳ ಕವನ ) ಆಗಸದಲ್ಲಿ ಕಾಮನಬಿಲ್ಲನು ಮೂಡಿಸಿದವನು ನಾನಲ್ಲ ಬಾನಿನಲ್ಲಿ ಹಕ್ಕಿಗೆ ಹಾರಲು ಹೇಳಿಕೊಟ್ಟವ ನಾನಲ್ಲ..|| ಗಿಡದಲಿ ಚಂದದ ಹೂವನ್ನು ಅರಳಿಸಿದವನು ನಾನಲ್ಲ ಮಧುರವಾಗಿ ಕೋಗಿಲೆ ಹಾಡಲು ಹಾಡನು ಕಲಿಸಿದವ ನಾನಲ್ಲ || ರಾತ್ರಿಯ ವೇಳೆ ಬಾನಲಿ ಚುಕ್ಕಿ ಮುನುಗಲು ಕಾರಣ ನಾನಲ್ಲ ಚಂದ ಚಂದಿರ ನಮ್ಮನು ಸೆಳೆವನು ಸೆಳೆತಕೆ ಕಾರಣ ನಾನಲ್ಲ || ಗೋಡೆಯ ಮೇಲೆ ಗೊಂಬೆಯ ಚಿತ್ರ ಬಿಡಿಸಿದವನು ನಾನಲ್ಲ ಎದುರಿನ ಮನೆಯ ಕೋಣೆಯೊಳಗೆ ಚೆಂಡನು ಹೊಡೆದವ ನಾನಲ್ಲ || => ವೆಂಕಟೇಶ ಚಾಗಿ ಮುಂದಿನ ಕವನ ( click here ) 👉 ವೆಂಕಟೇಶ ಚಾಗಿ ( about me ) ಮತ್ತಷ್ಟು ಓದಿ 👉  ಕಗ್ಗಗಳು (click here) 👉 ಗಜಲ್ ಗಳು (click here) 👉 ಕವನಗಳು (click here ) 👉 ಕವಿತೆಗಳು (click here ) 👉 ಹಾಯ್ಕುಗಳು ( click here) 👉 ಹನಿಗವನಗಳು (click here ) 👉 ಮಕ್ಕಳ ಕಥೆಗಳು (click here) 👉 ಮಕ್ಕಳ ಕವನಗಳು (click here)

ಹಕ್ಕಿಯ ಆಹ್ವಾನ | ಮಕ್ಕಳ ಕವನ | ವೆಂಕಟೇಶ ಚಾಗಿ | hakkiya aahvana | venkatesh chagi

ಇಮೇಜ್
  **ಹಕ್ಕಿಯ ಆಹ್ವಾನ** ದೂರದಲ್ಲಿ ಹಕ್ಕಿಯೊಂದು  ನನ್ನ ಕರೆದಿದೆ ಹೇಳಲೊಂದು ಮಾತುವುಂಟು ಬರಲು ಹೇಳಿದೆ  || ಚೈತ್ರ ಮಾಸ ಚಿಗುರ ಕಂಡು ಹಕ್ಕಿ ನಲಿದಿದೆ ಜೊತೆಗೆ ನನ್ನ ಕರೆದುಕೊಂಡು ದೂರ ಹಾರಿದೆ || ತಳಿರಿನೊಳಗೆ ಎಳೆಯದಾದ ಮಾವು ಕಂಡಿದೆ ಕುಕ್ಕಿ ಕುಕ್ಕಿ ಸವಿಯ ಬಯಸಿ ನನಗೂ ತಿನಿಸಿದೆ || ಬಾನಿನಲ್ಲಿ ಮೋಡವೊಂದು ನಮ್ಮ ನೋಡಿದೆ ಹನಿಯ ತಾಳಿ ನಮ್ಮ ಸೇರಿ ಕುಣಿಯ ಬಯಸಿದೆ || ಬಣ್ಣದಲ್ಲಿ ಬಿಲ್ಲು ಮೂಡಿ ರಂಗು ತಂದಿದೆ ಹನಿಗಳಲ್ಲಿ ಹಕ್ಕಿ ಮಿಂದು ದೂರ ಹಾರಿದೆ || => ವೆಂಕಟೇಶ ಚಾಗಿ ಮುಂದಿನ ಕವನ ( click here ) 👉 ವೆಂಕಟೇಶ ಚಾಗಿ ( about me ) ಮತ್ತಷ್ಟು ಓದಿ 👉  ಕಗ್ಗಗಳು (click here) 👉 ಗಜಲ್ ಗಳು (click here) 👉 ಕವನಗಳು (click here ) 👉 ಕವಿತೆಗಳು (click here ) 👉 ಹಾಯ್ಕುಗಳು ( click here) 👉 ಹನಿಗವನಗಳು (click here ) 👉 ಮಕ್ಕಳ ಕಥೆಗಳು (click here) 👉 ಮಕ್ಕಳ ಕವನಗಳು (click here)