ನಮ್ಮಯ ಅಜ್ಜಿ | ಮಕ್ಕಳ ಕವನ | ವೆಂಕಟೇಶ ಚಾಗಿ | nammaya ajji | makkala kavana | venkatesh chagi
ನಮ್ಮಯ ಅಜ್ಜಿ* ಅಜ್ಜಿ ಅಂದರೆ ನನಗೆ ಇಷ್ಟ ಅಜ್ಜಿ ಕೊಡುವ ಚೆಕ್ಕುಲಿ ಇಷ್ಟ ಅಜ್ಜಿಯ ಜೊತೆಗೆ ಆಟವು ಇಷ್ಟ ಅಜ್ಜಿ ಇರದಿರೆ ತುಂಬಾ ಕಷ್ಟ | ಪೇಟೆಗೆ ಹೋದರೆ ನಮ್ಮಯ ಅಜ್ಜಿ ತರುವಳು ತಿಂಡಿಯ ನಮ್ಮಯ ಅಜ್ಜಿ ಹೊಸ ಹೊಸ ಬಟ್ಟೆ ಗಿಲಿಗಿಲಿ ಗೆಜ್ಜೆ ಮರೆಯದೆ ತರುವಳು ಪ್ರೀತಿಯ ಅಜ್ಜಿ ಜಾತ್ರೆಗೆ ಹೋದರೆ ನಮ್ಮಯ ಅಜ್ಜಿ ತಿನ್ನಲು ತರುವಳು ಬಿಸಿಬಿಸಿ ಬಜ್ಜಿ ಕೀಲಿ ಕಾರು ಚೆಂದದ ಗೊಂಬೆ ಮರೆಯದೆ ತರುವಳು ಪ್ರೀತಿಯ ಅಜ್ಜಿ | ಹಳ್ಳಿಗೆ ಹೋದರೆ ನಮ್ಮಯ ಅಜ್ಜಿ ಮನೆಗೆ ತರುವಳು ಜೋಳ ಸಜ್ಜಿ ಪೇರಲ ಮಾವು ನೇರಳೆ ಹಣ್ಣು ನನಗೆ ತರುವಳು ಮರೆಯದೆ ಅಜ್ಜಿ ಅಜ್ಜಿ ಅಜ್ಜಿ ಎಲ್ಲರ ಅಜ್ಜಿ ಮುದ್ದಿಸಿ ಉಣಿಸುವ ಮದ್ದಿನ ಅಜ್ಜಿ ಪಾಠವ ಓದಿಸಿ ಲೆಕ್ಕವ ಮಾಡಿಸಿ ಮಲಗಿಸಿ ಬಿಡುವಳು ಲಾಲಿಯ ಹಾಡಿ ✍ ವೆಂಕಟೇಶ ಚಾಗಿ